
18th June 2025
ರಾಯಚೂರು,ಜೂ ೧೫- ಜಿಲ್ಲೆಯ ದೇವದರ್ಗ ತಾಲೂಕಿನಲ್ಲಿ ರಾಷ್ಟ್ರೀಯ ಗ್ರಾಮೀಣ
ಉದ್ಯೋಗ ಖಾತ್ರಿ ಯೋಜನೆಯಡಿ ನಡೆದಿರುವ ಅಕ್ರಮ ಪ್ರಕರಣವನ್ನು ಸಿಬಿಐ ತನಿಖೆಗೆವಹಿಸಿ ತಪ್ಪಿತಸ್ಥ ಎಲ್ಲಾ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಕರ್ಯರ್ತ ಶರಣಬಸವ ಹೂಗಾರ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
೨೦೨೦-೨೧ ಮತ್ತು ೨೦೨೧-೨೨ ಸಾಲಿನಲ್ಲಿ ದೇವದರ್ಗ ತಾಲೂಕಿನ ೩೩ ಗ್ರಾಮಗಳ ಉದ್ಯೋಗ ಖಾತ್ರಿ ಯೋಜನೆಯಡಿ ಅಕ್ರಮವಾಗಿರುವ ಕುರಿತು ಸಾಮಾಜಿಕ ಲೆಕ್ಕ ಪರಿಶೋಧನೆಯ ತಂಡ ಪರಿಶೀಲನೆ ವರದಿ ನೀಡಿದೆ. ೧೪೦ ಕೋಟಿ ರೂ ಅಕ್ರಮವಾಗಿ ರುವ ಕುರಿತು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ, ಜಿಲ್ಲಾ ತಾಲೂಕ ಪಂಚಾಯ್ತಿ ಅಧಿಕಾರಿಗಳು ಸೇರಿ ಪಂಚಾಯ್ತಿ ಪಿಡಿಓಗಳು ಹಾಗೂ ಹೊರಗುತ್ತಿಗೆ ನೌಕರರ ಲೋಪವನ್ನು ಮಧ್ಯಂತರ ವರದಿಯಲ್ಲಿ ಉಲ್ಲೇಖಿಸಿ ನೀಡಲಾಗಿ ದೆ. ಆದರೂ ಪಿಡಿಓಗಳ ಸಾಮೂಹಿಕ ರ್ಗಾವಣೆ ಹೊರತುಪಡಿಸಿದರೆ ತಾಲೂಕ ಪಂಚಾಯ್ತಿ ಉದ್ಯೋಗ ಖಾತ್ರಿ ಯೋಜನೆ ಉಪನರ್ದೇಶಕರುಗಳು, ಜಿಲ್ಲಾ ಪಂಚಾಯ್ತಿ ಹಾಗೂ ರಾಜ್ಯ ಮಟ್ಟದ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮವಾಗಿಲ್ಲ. ತನಿಖಾ ವರದಿಯಲ್ಲಿ ಹಣ ದುರುಪಯೋಗ ಪಡೆಸಿಕೊಂಡವರ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸಿ ಹಣವಸೂಲಿ ಮಾಡು ಸೂಚಿಸಿದ್ದರೂ ಕ್ರಮವಾಗುತ್ತಿಲ್ಲ. ಪಂಚಾಯತ್ ರಾಜ ಇಲಾಖೆ ಅಪರ ಮುಖ್ಯ ಕರ್ಯರ್ಶಿ ಹಾಗೂ ಅಂದಿನ ಜಿಲ್ಲಾ ಪಂಚಾಯ್ತಿ ಮುಖ್ಯ ಕರ್ಯನರ್ವಾಹಕ ಅಧಿಕಾರಿ, ನೋಡೆಲ್ ಅಧಿಕಾರಿಗಳು ಸೇರಿದಂತೆ ಹಣ ವ್ಯವಹಾರ ನಡೆಸಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ರ್ಕಾರ ಮುಂದಾಗುತ್ತಿಲ್ಲ. ತನಿಖೆ ಅಕ್ರಮ ಬಹಿರಂಗಗೊಂಡರೂ ರಕ್ಷಣೆ ಮಾಡಲಾಗುತ್ತಿದೆ. ಕೂಡಲೇ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಶಿಫಾರಸ್ಸು ಮಾಡಬೇಕು, ಅಕ್ರಮಗಳು ನಡೆಯದಂತೆ ತಡೆಯಬೇಕೆಂದು ದೂರಿನಲ್ಲಿ ಮನವಿ ಮಾಡಲಾಗಿದೆ.ಮತ್ತು ಸಾಮಾಜಿಕ ಪರಿಶೋಧನ ನರ್ದೇಶನಾಲಯದ ರಾಜ್ಯ ಕಚೇರಿಯಲ್ಲಿ ಕೆಲಸ ನರ್ವಹಿಸುತ್ತಿರುವ ಕೆಲವು ಅಧಿಕಾರಿಗಳು ಅಕ್ರಮ ದಲ್ಲಿ ಭಾಗಿಯಾಗಿ ತನಿಖೆ ನಡೆಸದಿರಲು ಹಣದ ಆಮಿಷ ಒಡ್ಡಿ ಕುಮ್ಮುಕ್ಕು ನೀಡುತ್ತಿರುವುದು ಕಂಡುಬಂದಿರುತ್ತದೆ ಆದ್ದರಿಂದ ಶೀಘ್ರವೇ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈ ಗೊಳ್ಳದಿದ್ದರೆ ಉಗ್ರಾ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ ಮತ್ತು ಸಂಬಂದಿಸಿದ ಎಲ್ಲಾ ಧಾಖಲೆಗಳನ್ನು ಮುಖ್ಯ ಮಂತ್ರಿ ಹಾಗು ಸಚಿವರಿಗೆ ನೀಡುತ್ತೇವೆ ಎಂದು ತಿಳಿಸಿರುತ್ತಾರೆ
ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ ಕುಷ್ಟಗಿ ಇದರ ವಾರ್ಷಿಕ ಸಭೆ
ಹಜರತ್ ಹೈದರ್ ಅಲಿ ಕಮೀಟಿ ತೆಗ್ಗಿನಓಣಿ ಹಾಗೂ ಸಂಜೀವಿನಿ ರಕ್ತ ನಿಧಿ ಕೇಂದ್ರ ಸಹಯೋಗಲ್ಲಿ 5ನೇ ವರ್ಷದ ರಕ್ತದಾನ ಶಿಬಿರ